ಕೃಷಿಕರಲ್ಲದವರು ಕಾಫಿ ಬೆಳೆ ಇರುವ ಭೂಮಿಯನ್ನು ಖರೀದಿಸಬಹುದೇ? (CAN A NON- AGRICULTURIST PURCHASE COFFEE PLANTATION IN KARNATAKA.)
ಬೆಂಗಳೂರಿನ ಸುತ್ತಮುತ್ತ ಮತ್ತು ಅರೆ ಮಲೆನಾಡಿನ ಪ್ರದೇಶಗಳಲ್ಲಿ ಕಾಫಿ ತೋಟಗಳನ್ನು ಅಭಿವೃದ್ದಿಪಡಿಸಿ, ಅದನ್ನು ಕೃಷಿಕರಲ್ಲದವರೂ ಕೂಡ ಖರೀದಿಸಬಹುದೆಂದು ಪ್ರಚಾರ ಮಾಡಿ ಗುಂಟೆಗಳ ಲೆಕ್ಕದಲ್ಲಿ ಮಾರುವ ಕೆಲಸವನ್ನು ಹಲವು ಡೆವಲಪರ್ಸಗಳು ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಬೆಂಗಳೂರು ನಗರದ ಜೀವನದಿಂದ ರೋಸಿದ ಕೃಷಿಕರಲ್ಲದ ಹಣವಂತರು ಈ ತರಹದ ಆಮಿಷಗಳಿಗೆ ಬಲಿಯಾಗುವ ಲಕ್ಷಣಗಳು ಕಂಡು ಬರುತ್ತಿವೆ, ಆದುದರಿಂದ ವಕೀಲನಾಗಿ ಜನರನ್ನು ಕೊಳ್ಳುವ ಮುಂಚೆಯೇ ಎಚ್ಚರಿಸುವುದು ನನ್ನ ಕರ್ತವ್ಯವೆಂದು ಈ ಕೆಳಕಂಡ ಅಂಶಗಳನ್ನು ಗಮನಿಸಿದ ನಂತರವೇ ಖರೀದಿಯನ್ನು ಮಾಡಬೇಕೆಂದು ಇಲ್ಲಿ ದಾಖಲಿಸುತ್ತಿದ್ದೆನೆ.
1. ಪ್ಲಾಂಟೇಷನ್ ಬೆಳೆಗಳು ಯಾವುವು? ಮತ್ತು ಯಾವು ಕಾಯ್ದೆಯಡಿ ಇವು ಪ್ಲಾಂಟೇಷನ್ ಬೆಳೆಗಳೆಂದು ಪರಿಗಣಿಸಲ್ಪಟ್ಟಿವೆ?.
ಉ: ಕರ್ನಾಟಕ ಭೂಸುಧಾರಣ ಕಾಯ್ದೆ, ಸೆಕ್ಷನ್ 104, ಪ್ಲಾಂಟೇಷನ್ ಬೆಳೆಯುಳ್ಳ ಭೂಮಿಯನ್ನು ಕರ್ನಾಟಕ ಭೂಸುಧಾರಣ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ ಎಂದು ತಿಳಿಸುತ್ತದೆ, ಸದರಿ ಕರ್ನಾಟಕ ಭೂಸುಧಾರಣ ಕಾಯ್ದೆಯ ಸೆಕ್ಷನ್ 2(25) ರ ಪ್ರಕಾರ ಎಲಕ್ಕಿ, ಕಾಫಿ, ಮೆಣಸು, ರಬ್ಬರ್ ಮತ್ತು ಟೀ ಗಳು ಪ್ಲಾಂಟೇಷನ್ ಬೆಳೆಗಳೆಂದು ಪರಿಗಣಿಸಲ್ಪಟ್ಟಿವೆ.
2. ಕರ್ನಾಟಕ ಭೂಸುಧಾರಣ ಕಾಯ್ದೆ ಸೆಕ್ಷನ್ 104 ರ ಪ್ರಕಾರ ಯಾವುದೇ ಕೃಷಿ ಭೂಮಿಯಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಸಿದ್ದರೆ, ಆ ಭೂಮಿಯನ್ನು ಯಾವುದೇ ಕೃಷಿಕರಲ್ಲದವರು, ಕೃಷಿಯಿಂದ 25 ಲಕ್ಷಕ್ಕಿಂತಲೂ ಹೆಚ್ಚಿನ ಆದಾಯ ಹೊಂದಿರುವ ಯಾವುದೇ ವ್ಯಕ್ತಿಯು ಖರೀದಿಸಬಹುದೇ?
ಉ: ಖರೀದಿಸಬಹುದು, ಆದರೆ ಆದರೆ ಆ ಭೂಮಿಯಲ್ಲಿ 1.1.1974 ರಂದು ಪ್ಲಾಂಟೇಷನ್ ಬೆಳೆ ಇದ್ದವೆಂದು ನಮೂದಾಗಿರಬೇಕು. ಆದರೆ ಹೊಸದಾಗಿ ಕೃಷಿ ಭೂಮಿಯಲ್ಲಿ ಪ್ಲಾಂಟೇಷನ್ ಬೆಳೆಗಳನ್ನು ಬೆಳೆಸಿದವರು ಈ ಕೆಳಕಂಡ ಕಾನೂನುಗಳನ್ನು ಪಾಲಿಸದ ಪಕ್ಷದಲ್ಲಿ ಮಾತ್ರ ಆ ಭೂಮಿಯು ಪ್ಲಾಂಟೇಷನ್ ಎಂದು ಪರಿಗಣಿಸಪಲ್ಷಡುತ್ತದೆ.
ಅ. ಯಾವುದೇ ಕಾಫಿ ಕೃಷಿಯನ್ನು ಬೆಳೆಸುತ್ತಿರುವ ಕೃಷಿಕನು ಕಾಫಿ ಕಾಯ್ದೆ ಸೆಕ್ಷನ್ 14 ರಡಿಯಲ್ಲಿ ನೋಂದಾವಣೆ ಮಾಡಿರಬೇಕು, ಮತ್ತು ಕಂದಾಯ ಇಲಾಖೆಯ ಆರ್ ಟಿ ಸಿ ಯಲ್ಲೂ ಸಹ ಬೆಳೆಯ ಕಾಲಂನಲ್ಲಿ ಅದು ಕಾಫಿಯೆಂದು ನಮೂದಾಗಿರಬೇಕು.
3. ಮೇಲಿನ ನಿಬಂದನೆಗಳನ್ನು ಪಾಲಿಸದೆ ಕೃಷಿಕರಲ್ಲದವರು ಅಥವಾ/ಮತ್ತು ಕೃಷಿಯಿಂದ 25 ಲಕ್ಷಕ್ಕಿಂತಲೂ ಹೆಚ್ಚಿನ ಆದಾಯ ಹೊಂದಿರುವವರು ಖರೀದಿ ಮಾಡಿದರೆ ಎನಾಗುತ್ತದೆ.
ಉ : ಈ ಖರೀದಿಯು ಕರ್ನಾಟಕ ಭೂಸುಧಾರಣ ಕಾಯ್ದೆ ಸೆಕ್ಷನ್ 79 ಎ ಮತ್ತು ಬಿ ಯ ಉಲ್ಲಂಘನೆಯಾಗುತ್ತದೆ, ಮತ್ತು ರಾಜ್ಯ ಸರ್ಕಾರವು ವಿಚಾರಣೆ ನಡೆಸಿ, ಭೂಮಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಹೊಂದಿದೆ.
DISCLAIMER:
This article is for general information purposes only. Always consult a Lawyer before you proceed with your case. Your situation might need a different approach.
Comments
Post a Comment