Posts

Showing posts from December, 2014

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬ್ಲಾಕ್ ಮನಿ ಹೂಡಿಕೆ ತಡೆಯು ವುದು ಹೇಗೆ . . .??!!!****

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬ್ಲಾಕ್ ಮನಿ ಹೂಡಿಕೆ ತಡೆಯು ವುದು ಹೇಗೆ ??!!!**** ಪ್ರಸ್ತುತ ಭಾರತದಲ್ಲಿ, ಭಾರತೀಯರು ವಿದೇಶಿ ಬ್ಯಾಂಕುಗಳಲ್ಲಿ ಅಡಗಿಸಿರುವ ಅಗಾಧ ಪ್ರಮಾಣದ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುವ ಬಗ್ಗೆ ಚರ್ಚೆ ಬಿಸಿಬಿಸಿಯಾಗಿ ನಡೆಯುತ್ತಿದೆ.. . . . ಮತ್ತೆ ಕೆಲವರು ಭಾರತದಲ್ಲೆ ಚಲಾವಣೆಯಲ್ಲಿ ಇರುವ ಮೂದಲು ಹೊರ ತರುವ ಕಾರ್ಯವಾಗಬೇಕೆಂದು ಅಗ್ರಹಿಸುತ್ತಿದ್ದಾರೆ. . . ಆದರೆ ಸಾಮಾನ್ಯ ಜನರಿಗೆ ಕಪ್ಪು ಹಣದ ಕಥೆ ಇರಲಿ, ದಿನದೂಡಲು ಅಗತ್ಯವಾದ ಹಣವನ್ನು ಹೊಂದಿಸಲು ಹರಸಾಹಸ ಪಡುತ್ತಿದ್ದಾರೆ. .  . ನಾವು ಕಪ್ಪು ಹಣದ ಬಗ್ಗೆ ಮೊದಲು ಮಾತನಾಡುವ ಮುನ್ನ ‘ ಕಪ್ಪು ಹಣ’ ದ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಸರಳವಾಗಿ ಹೇಳುವುದಾದರೆ, ಯಾವುದೇ ಹಣ ದೇಶದಲ್ಲಿ ಚಾಲ್ತಿಯಲ್ಲಿರುವ ತೆರಿಗೆಗಳನ್ನು ಪಾವತಿಸದೆ ವಂಚನೆ ಮಾಡಿ ಗಳಿಸಿದ ಹಣವಾಗಿರುತ್ತದೆ. . . . ಭಾರತದಲ್ಲಿ ಈ ಹಣವನ್ನು ಅಡಗಿಸಿಟ್ಟರೆ ತೆರಿಗೆ ಇಲಾಖೆಯು ಯಾವಾಗಲಾದರೂ ದಾಳಿ ನಡೆಸಬಹುದು ಎನ್ನುವ ಕಾರಣದಿಂದ ಮತ್ತು ವಿದೇಶಗಳ ಬ್ಯಾಂಕಿಗ್ ನಿಯಮಗಳು ಅಡಗಿಸಿಟ್ಟ ಕಪ್ಪು ಹಣದ ಗುಟ್ಟನ್ನು ಕಾಪಾಡಿಕೊಳ್ಳುವ ಕಾನೂನುಗಳನ್ನು ಹೊಂದಿರುವ ಕಾರಣದಿಂದ ವಿದೇಶಿ ಬ್ಯಾಂಕ್‍ಗಳಲ್ಲೆ ಠೇವಣಿ ಇಡುವುದು ಸುರಕ್ಷಿತವೆಂದು ಅಲ್ಲಿಯ ಬ್ಯಾಂಕುಗಳಲ್ಲೆ ಠೇವಣಿ ಮಾಡಿದರು. ಆದರೆ ಕೆಲವರು ವಿದೇಶಗಳಲ್ಲಿ ಠೇವಣಿ ಮಾಡದೆ, ಅದಕ್ಕಿಂತ ಸುರಕ್ಷಿತವಾದ ಭಾರತದ ರಿಯಲ್ ಎಸ್...